ತಲೆಬುರುಡೆಗೆ ಪಿಂಕ್ ಸ್ಲಿಪ್?!
ಆತ್ಮೀಯ ನೆಟ್ ಅಲೆಮಾರಿಗಳೆ ಹಾಗು ಇತರರೆ,
ಬದಲಾವಣೆ ಈ ಜಗದ ನಿಯಮ. ಅನಾದಿಕಾಲದಿಂದ ಇಂದಿನವರೆಗೆ ಏನೇನೊ ಬದಲಾಗಿದೆ. ಆದರೆ ಬದಲಾಗದಿರುವುದು ಈ ನಿಯಮ ಮಾತ್ರ.
ಬದಲಾವಣೆ ಈ ಜಗದ ನಿಯಮ ಎನ್ನುವುದನ್ನು ಈಗಿನ ಆಧುನಿಕ ಕಾಲದವರು ಚೆನ್ನಾಗಿ ಮನದಟ್ಟು ಮಾಡಿಕೊಂಡಿದ್ದಾರೆ. ಹಾಗಾಗಿ ರಾಜಕಾರಣಿಯಿಂದ ಜನಸಾಮಾನ್ಯನವರೆಗೂ, ಮೊಟಾರು ಕಂಪನಿಯವರಿಂದ ಹಿಡಿದು ಮೊಬೈಲ್ ಕಂಪನಿಯವರವರೆಗೂ ಈ ನಿಯಮ ಚಾಚು ತಪ್ಪದೆ ಪಾಲಿಸಲಾಗುತಿದೆ. ಇವರಲ್ಲಿ ರಾಜಕಾರಣಿಗಳು ಮುಂಚೂಣಿಯಲ್ಲಿದ್ದಾರೆ. ಇವತ್ತು ಈ ಪಕ್ಷ, ನಾಳೆ ಇನ್ನೊಂದು. ಅದರ ನಂತರ ತಮ್ಮದೇ ಹೊಸತೊಂದು!
ಜನಸಾಮಾನ್ಯನ ವಿಷಯಕ್ಕೆ ಬಂದರೆ, ಇವತ್ತು Nokia2600 handset ಒಂದಿಷ್ಟು ದಿನಗಳ ನಂತರ ನೀಲಿ ಹಲ್ಲು(blue tooth) ಇರುವ ಮೊಬೈಲ್. ಒಂದಿಷ್ಟು ತಿಂಗಳ ನಂತರ ಅದಕ್ಕಿಂತ advanced set. ಒಂದಿಷ್ಟು ದಿನ Spice ಜತೆ ಚೆಲ್ಲಾಟ, ಮುಂದೆ Airtel ನೊಂದಿಗೆ ಚಕ್ಕಂದ. ಅದಾದ ಮೇಲೆ Hutch ನ ಸಹವಾಸ.
ಇನ್ನು ಜನ'ಅಸಾಮಾನ್ಯರ' ವಿಷಯ: ಇಂದು ಇವಳೊಂದಿಗೆ / ಇವನೊದಿಗೆ 'ಒಡನಾಟ', ನಾಳೆ ಇನ್ನ್ಯಾರಿಗೋ ಆ ಸ್ಥಾನ. ಮುಂದೊಂದು ದಿನ ಮತ್ತ್ಯಾರೊಂದಿಗೊ ಜೀವನ 'ಹಂಚಿಕೆ'!!!!
'ತಲೆಹರಟೆ'ಗೂ ಈ ನಿಯಮದಿಂದ ವಿನಾಯಿತಿ ಇಲ್ಲ. ನೀವೆಲ್ಲಾ ಈ ಬ್ಲಾಗ್ ನಿವೇಶನಕ್ಕೆ ಭೇಟಿ ಕೊಟ್ಟು, ಅಭಿಪ್ರಾಯಗಳನ್ನು ದಾಖಲಿಸಿ,ಮೆಚ್ಚುಗೆಯ ಮಾತನ್ನು ಆಡಿ ಪ್ರೋತ್ಸಾಹಿಸಿದ್ದೀರಿ. ಇದಕ್ಕೆ ನಾನು ನಿಮಗೆ ಚಿರಋಣಿ. ಇಲ್ಲಿ ಪಕ್ಕದಲ್ಲಿರುವ ತಲೆಬುರುಡೆ ಇಷ್ಟು ದಿನಗಳ ನಂತರ ಅದೇಕೊ irritating ಅನ್ನಿಸುತ್ತಿದೆ. ಇಷ್ಟು ದಿನ ಈ ನಿವೇಶನದ ಮೇಲೆ ಯಾರ 'ದೃಷ್ಟಿಯೂ ಬೀಳದಂತೆ' ನೋಡಿಕೊಂಡಿದಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿ ಒಂದು ಪಿಂಕ್ ಸ್ಲಿಪ್ ನೀಡಬೇಕೆಂದುಕೊಂಡಿದ್ದೇನೆ. ನನಗೆ ಇದರ ಬಗ್ಗೆ ನಿಮ್ಮ ಅಭಿಪ್ರಾಯದ ತೀವ್ರ ಅವಶ್ಯಕತೆ ಇದೆ. ಈ ತಲೆಬುರುಡೆ ಇಲ್ಲಿರುವುದರಿಂದ ನಿಮಗೇನು ಅನ್ನಿಸಿದೆ, ಇದನ್ನು ಬದಲಾಯಿಸಬೇಕಾ ಅಥವ ಅದರಪಾಡಿಗೆ ಅದನ್ನು ಅಲ್ಲಿಯೇ ಬಿಡಬೇಕಾ? ಎಂದು ತಿಳಿಸಬೇಕಾಗಿ ವಿನಂತಿ.
ಇಂತಿ
ತಲೆಹರಟೆ