ಗೌಡರ ತುಟಿಯಂಚಿನಲ್ಲಿ ತುಂಟನಗೆ?
ಹಾಲಿ ಮಾಜಿ ಪ್ರಧಾನಿ ಡಿ ಗೌಡರಿಗೆ ಪತ್ರಕರ್ತರೆಂದರೆ ಅಷ್ಟಕಷ್ಟೆ. ಅವರ ಪ್ರಕಾರ ಪತ್ರಕರ್ತರೆಲ್ಲಾ ತಲೆಹರಟೆಗಳು. ಅದರಲ್ಲೂ ನನ್ನ ಹೆಸರೇ ತಲೆಹರಟೆ ಎಂದಿರುವಾಗ ಕೇಳಬೇಕೆ? ಅಂತು ಇಂತು ಕಷ್ಟಪಟ್ಟು ಸಂದರ್ಶನ ಪಡೆಯುವಷ್ಟರಲ್ಲಿ ನನ್ನ ತಲೆ ಹನ್ನೆರಡಾಣೆ ಆಗಿ 'ತಲೆಹರಟೆ'ಗೆ ತಲೆಯೇ ಇಲ್ಲ ಎನ್ನುವ ಹಾಗಾಗಿದೆ. ಆದರೆ ಸಂದರ್ಶನ ವೇಳೆ ಆಡಿದ ಮಾತುಗಳೆಲ್ಲಾ ಆಫ್ ದಿ ರೆಕಾರ್ಡ್!! ಆದರೂ ಧೈರ್ಯ ಮಾಡಿ ಸಂದರ್ಶನದ ಒಂದೆರಡು ತುಣುಕುಗಳನ್ನು ಇಲ್ಲಿ ನೀಡಿದ್ದೀನಿ.
ತಲೆಹರಟೆ: ಗೌಡ್ರೇ ನಿಮ್ಮ ಇದುವರೆಗಿನ ಮಹತ್ತರ ಸಾಧನೆ ಯಾವುದು?
ಗೌಡ್ರು: ಮಗನನ್ನು ಸಿ ಎಮ್ ಮಾಡಿದ್ದು. ಇದು ಆಫ್ ದಿ ರೆಕಾರ್ಡ್. ಪತ್ರಿಕೆಯಲ್ಲಿ ಪ್ರಕಟಿಸಬೇಡಿ.
ತಲೆಹರಟೆ: ನೀವು ಕೆಲವು ತಿಂಗಳ ಹಿಂದಿನವರೆಗೂ ಸರಾಸರಿ ದಿನಕ್ಕೊಂದು ಪತ್ರ ಬರೆಯುತ್ತಿದ್ದರಲ್ಲ. ಈಗೇಕೆ ನಿಮ್ಮ ಪತ್ರಗಳು ಅಪರೂಪ ಆಗಿಬಿಟ್ಟಿದೆ.
ಗೌಡ್ರು: ವಯಸ್ಸಾಯಿತು. ಪತ್ರ ಬರೆದು ಬರೆದು ಸುಸ್ತಾಗಿದ್ದೀನಿ. ಸ್ವಲ್ಪ ಸುಧಾರಿಸಿಕೊಳ್ಳೋಣ ಎಂದು ಸುಮ್ಮನಾಗಿದ್ದೀನಿ. ಹದಿನಾರು ತಿಂಗಳು ರೆಸ್ಟ್. ಆಮೇಲೆ ನೋಡಿ ಮತ್ತೆ ಪ್ರಾರಂಭ ಆಗುತ್ತೆ ನನ್ನ ಪತ್ರಾವಳಿ! (ಪತ್ರ ಹಾವಳಿ? ಆಡಳಿತ ಹಂಚಿಕೆ ಸೂತ್ರದ ಪ್ರಕಾರ ಇನ್ನು ಹದಿನಾರು ತಿಂಗಳ ನಂತರ ಮಂಡಿಊರಿ-ಯಡಿಯೂರಿ ಅಲ್ಲ-ಎಂಬುವವರು ಮುಖ್ಯ ಮಂತ್ರಿ ಆಗಲಿದ್ದಾರೆ....ಸಂದರ್ಶಕ).
ತಲೆಹರಟೆ: ನೀವು ಸೋನಿಯಾಗೂ ಪತ್ರ ಬರೆಯುತ್ತಿದ್ದರಲ್ಲಾ ಆಗ ನಿಮ್ಮ ಧರ್ಮಪತ್ನಿ ಏನು ಅನ್ನುತಿರಲ್ಲಿಲ್ಲವಾ?
ಗೌಡ್ರು: ..............................(ಗೌಡರ ತುಟಿಯಂಚಿನಲ್ಲಿ ತುಂಟನಗೆಯೊಂದು ಮಿಂಚಿ ಮಾಯವಾಯಿತು)

2 Comments:
ತಲೆಹರಟೆಯವರು ಹಾಫ್ ರೆಕಾರ್ಡ್ ಮಾಡುವುದನ್ನು ನಿಲ್ಲಿಸಿ ಫುಲ್ ರೆಕಾರ್ಡ್ ಮಾಡಬೇಕೆಂದು ವಿನಂತಿ. ಗೌಡ್ರು ತಮ್ಮ ಪುತ್ರನನ್ನು ಸಿಎಂ(ಚೀಫ್ ಆಫ್ ಮೆಂಟಲ್ಸ್) ಗದ್ದುಗೆಗೇರಿಸಿ ಮೆಡಿಟೇಶನ್ ಮಾಡುತ್ತಿದ್ದಾರೆಂದು ಜೆಡಿಎಸ್ (ಜಗಳ ಗ್ರೂಪ್ ಆಫ್ ದೇಗೌ ಅಂಡ್ ಸನ್ಸ್) ಮೂಲಗಳು ತಿಳಿಸಿಲ್ಲವೇನು?
ಮಾನ್ಯ ಸಾರಥಿ,
ಈ ತಲೆಹರಟೆ ಎಂಬ ಬಡಜೀವಿ ಇನ್ನೊಂದಿಷ್ಟು ದಿನ ಬದುಕಬೇಕೊ ಬೇಡವೋ? ನಾನು ವಾಸ ಇರುವುದು ಗೌಡರ ಪಕ್ಕದ ಊರಿನಲ್ಲಿ ಸ್ವಾಮಿ!! ಫುಲ್ ರೆಕಾರ್ಡ್ ಮಾಡಿದರೆ ನನ್ನ ಗತಿ ಎನಾಗುತ್ತೆ ನೀವೆ ಊಹಿಸಿ.........
Post a Comment
<< Home