Thursday, May 11, 2006

ಅಹಾ! ಎಂತಹ ಹೊಂದಾಣಿಕೆ!!!!!!!!

ಕುಮಾರಿ ಜಯಲಲಿತಗೆ `ಕರುಣಾ'ಜನಕ ಸೋಲು, ಕರುಣಾನಿಧಿಗೆ `ಜಯ'ಮಾಲೆ. ಒಂದು ಅವಧಿಗೆ ಜಯಲಲಿತಾ, ಇನ್ನೊಂದು ಅವಧಿಗೆ ಕರುಣಾನಿಧಿ. ಇದು ಹಿಂದಿನಿಂದಲೂ ನಡೆದು ಬಂದ `ಸಂಪ್ರದಾಯ'. ಇದು ಯಾರ ಗೆಲವೂ ಅಲ್ಲ ಸೋಲೂ ಅಲ್ಲ; ಅದ್ಭುತ ಹೊಂದಾಣಿಕೆಯಷ್ಟೆ!!!!
ಒಂದು ಅವಧಿಗೆ ಇವರು ಆಡಳಿತ ನಡೆಸಿ ಬಾಚಿಕೊಳ್ಳುವುದು, ಇನ್ನೊಂದು ಅವಧಿಗೆ ಇನ್ನೊಬ್ಬರಿಗೆ ಅವಕಾಶ ಮಾಡಿಕೊಡುವುದು. ಈ ಹಿಂದಿನ ಐದು ವರ್ಷದಲ್ಲಿ `ಬಾಚಿ'ರುವುದನ್ನು ಸರಿಯಾಗಿ ಜೋಡಿಸಿ ಕೊಳ್ಳಬೇಕಲ್ಲ, ಅದಕ್ಕೆ ಈಗ ಜಯಲಲಿತಾಗೆ ಐದು ವರ್ಷ ಕಾಲಾವಕಾಶ ನೀಡಿರುವುದು. ಈಗ ಕರುಣಾನಿಧಿ ಬಾಚಿಕೊಳ್ಳುತ್ತಾರೆ. ಆಮೇಲೆ ಅವರಿಗೆ ಐದು ವರ್ಷ ರೆಸ್ಟ್. ಹೇಗಿದೆ ಭಲೇ ಜೋಡಿ?

1 Comments:

Blogger Anveshi said...

ಓಹ್... ಆಗ್ಲೇ ತಲೆಹರಟೆ ಶುರುಹಚ್ಚಿಕೊಂಡಿದ್ದೀರಾ....!
ಚೆನ್ನಾಗಿದೆ... ಮುಂದುವರಿಸಿ...
ನಿಮ್ಮ ಬ್ಲಾಗ್ ನಲ್ಲಿ ಲಿಂಕ್ ಕೊಟ್ಟಿದ್ದಕ್ಕೆ ಬೊಗಳೆ ರಗಳೆ ಬ್ಯುರೋದ ಸಮಸ್ತ ಏಕಾಂಗಿ ಸದಸ್ಯರಿಂದ ಧನ್ಯವಾದಗಳು.

4:45 AM  

Post a Comment

<< Home