Sunday, May 21, 2006

ಭ್ರಷ್ಟಾಚಾರ ಕಾಣಿಸದಂತೆ 'ಕಾರ್ಯ' ನಿರ್ವಹಿಸಿ: ಮು ಮಂತ್ರಿ

ವರ್ಗಾವಣೆ 'ಜಾತ್ರೆ'ಯಲ್ಲಿ ತಿಂದುಂಡು ತೇಗುತ್ತಿರುವ ಭ್ರಷ್ಟಾಸುರನ ರೌದ್ರ ನರ್ತನದ ಬಗ್ಗೆ ವಿ.ಕ ಪತ್ರಿಕೆಯು 'ವರ್ಗ:ದುಡ್ಡು ಮಾಡೋರ ಸ್ವರ್ಗ' ಹೆಸರಿನ ಎಫ್ ಐ ಆರ್ ದಾಖಲಿಸಿದನ್ನು(ಮೇ ೧೭,೨೦೦೬) ಕಂಡು 'ಎಚ್ಚೆತ್ತು'ಕೊಂಡಿರುವ ಮಾನ್ಯ ಮು.ಮಂತ್ರಿ ಅಧಿಕಾರಿಗಳೊಂದಿಗೆ ತುರ್ತು ಸಮಾಲೋಚನ ಸಭೆಯನ್ನು ನಡೆಸಿ ವರ್ಗಾವಣೆ ವಿಚಾರದಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆಂದು ಅದೇ ಪತ್ರಿಕೆ ವರದಿ ಮಾಡಿದೆ(ಮೇ ೧೮,೨೦೦೬).

ಆದರೆ ಆ ಪತ್ರಿಕೆಯು ತನ್ನ ವರದಿಯಲ್ಲಿ ಸ್ಥಳ ಅಭವಾದಿಂದಲೋ ಅಥವ ಮುದ್ರರಾಕ್ಷಸನ ಹಾವಳಿಯಿಂದಲೋ ಬಹು ಮುಖ್ಯ ಮಾಹಿತಿಯನ್ನು ಕೈ ಬಿಟ್ಟು ಅಪೂರ್ಣ ವರದಿಯನ್ನು ನೀಡಿದೆ.

ಪ್ರಕಟವಾಗಿರುವ ವರದಿಯು "ವರ್ಗಾವಣೆ ವಿಚಾರದಲ್ಲಿ ಕಟ್ಟೆಚ್ಚರ ವಹಿಸುವಂತೆ ಮು ಮಂತ್ರಿ ಹೆಚ್.ಡಿ.ಕೆ.ಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ" ಎಂಬ ಸಾಲಿನೊಂದಿಗೆ ಪ್ರಾರಂಭವಾಗಿ, "ಭ್ರಷ್ಟಾಚಾರ ಕಂಡು ಬಂದರೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದರು" ಎಂಬ ಸಾಲಿನೊಂದಿಗೆ ಕೊನೆಗೊಳ್ಳುತ್ತದೆ.

ಆದರೆ ತಲೆಹರಟೆ ಎಂಬ ಲದ್ದೀಗಾರನ ಪ್ರಕಾರ ವಿ.ಕ ದಲ್ಲಿ ಪ್ರಕಟವಾಗಿರುವ ಮೂಲ ವರದಿಯ ಪ್ರಾರಂಭಿಕ ಸಾಲು ಹೀಗಿದೆ:"ವರ್ಗಾವಣೆಗೆ ಸಂಬಂಧಿಸಿದ ಒಂದೂ 'ಕೇಸು' ಸಹ 'ಹೊರಗಿನ'ವರಿಗೆ ಗೊತ್ತಾಗದಂತೆ ಕಟ್ಟೆಚ್ಚರವಹಿಸುವಂತೆ ಮು.ಮಂತ್ರಿ ಅಧಿಕಾರಿಗಳಿಗೆ 'ತಾಕೀತು' ಮಾಡಿದ್ದಾರೆ".ಕೊನೆಯ ಸಾಲು "ಭ್ರಷ್ಟಾಚಾರ ಕಂಡು ಬಂದರೆ 'ತಪ್ಪಿತಸ್ಥರ' ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಭ್ರಷ್ಟಾಚರ ಕಂಡು ಬಾರದಂತೆ 'ಕಾರ್ಯ' ನಿರ್ವಹಿಸುವಂತೆ ಸೂಚಿಸಲು ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದರು".

ಜೈ ಭ್ರಷ್ಟಾಸುರ!!!!!!!

2 Comments:

Blogger Sarathy said...

ಮುಖ್ಯಮಂತ್ರಿಗಳ ತಾಕೀತಿನಂತೆ ವಿಜಯಕರ್ನಾಟಕದ ವರದಿಗಾರರು ಕೆಲ ಪದಗಳನ್ನು ಬೇಕಂತಲೇ ಕೈಬಿಟ್ಟಿದ್ದಾರೆಂದು ತೋರುತ್ತದೆ.

5:04 AM  
Blogger ತಲೆಹರಟೆ said...

ಡಿಯರ್ ಸಾರಥಿ,
ಈಗೇನೊ ಕೆಲ ಪದಗಳನ್ನು ಮಾತ್ರ ಕೈ ಬಿಡಲಾಗಿದೆ, ಆದರೆ 'ಭಾರತದ ಸಮಯಗಳು(TOI)' ಬಂದಾಗ ಎಲ್ಲವನ್ನು ಕೈ ಬಿಟ್ಟರೆ ಗತಿ?

8:06 PM  

Post a Comment

<< Home