Friday, June 09, 2006

ತಲೆಬುರುಡೆಗೆ ಪಿಂಕ್ ಸ್ಲಿಪ್?!

ಆತ್ಮೀಯ ನೆಟ್ ಅಲೆಮಾರಿಗಳೆ ಹಾಗು ಇತರರೆ,

ಬದಲಾವಣೆ ಈ ಜಗದ ನಿಯಮ. ಅನಾದಿಕಾಲದಿಂದ ಇಂದಿನವರೆಗೆ ಏನೇನೊ ಬದಲಾಗಿದೆ. ಆದರೆ ಬದಲಾಗದಿರುವುದು ಈ ನಿಯಮ ಮಾತ್ರ.

ಬದಲಾವಣೆ ಈ ಜಗದ ನಿಯಮ ಎನ್ನುವುದನ್ನು ಈಗಿನ ಆಧುನಿಕ ಕಾಲದವರು ಚೆನ್ನಾಗಿ ಮನದಟ್ಟು ಮಾಡಿಕೊಂಡಿದ್ದಾರೆ. ಹಾಗಾಗಿ ರಾಜಕಾರಣಿಯಿಂದ ಜನಸಾಮಾನ್ಯನವರೆಗೂ, ಮೊಟಾರು ಕಂಪನಿಯವರಿಂದ ಹಿಡಿದು ಮೊಬೈಲ್ ಕಂಪನಿಯವರವರೆಗೂ ಈ ನಿಯಮ ಚಾಚು ತಪ್ಪದೆ ಪಾಲಿಸಲಾಗುತಿದೆ. ಇವರಲ್ಲಿ ರಾಜಕಾರಣಿಗಳು ಮುಂಚೂಣಿಯಲ್ಲಿದ್ದಾರೆ. ಇವತ್ತು ಈ ಪಕ್ಷ, ನಾಳೆ ಇನ್ನೊಂದು. ಅದರ ನಂತರ ತಮ್ಮದೇ ಹೊಸತೊಂದು!

ಜನಸಾಮಾನ್ಯನ ವಿಷಯಕ್ಕೆ ಬಂದರೆ, ಇವತ್ತು Nokia2600 handset ಒಂದಿಷ್ಟು ದಿನಗಳ ನಂತರ ನೀಲಿ ಹಲ್ಲು(blue tooth) ಇರುವ ಮೊಬೈಲ್. ಒಂದಿಷ್ಟು ತಿಂಗಳ ನಂತರ ಅದಕ್ಕಿಂತ advanced set. ಒಂದಿಷ್ಟು ದಿನ Spice ಜತೆ ಚೆಲ್ಲಾಟ, ಮುಂದೆ Airtel ನೊಂದಿಗೆ ಚಕ್ಕಂದ. ಅದಾದ ಮೇಲೆ Hutch ನ ಸಹವಾಸ.

ಇನ್ನು ಜನ'ಅಸಾಮಾನ್ಯರ' ವಿಷಯ: ಇಂದು ಇವಳೊಂದಿಗೆ / ಇವನೊದಿಗೆ 'ಒಡನಾಟ', ನಾಳೆ ಇನ್ನ್ಯಾರಿಗೋ ಆ ಸ್ಥಾನ. ಮುಂದೊಂದು ದಿನ ಮತ್ತ್ಯಾರೊಂದಿಗೊ ಜೀವನ 'ಹಂಚಿಕೆ'!!!!

'ತಲೆಹರಟೆ'ಗೂ ಈ ನಿಯಮದಿಂದ ವಿನಾಯಿತಿ ಇಲ್ಲ. ನೀವೆಲ್ಲಾ ಈ ಬ್ಲಾಗ್ ನಿವೇಶನಕ್ಕೆ ಭೇಟಿ ಕೊಟ್ಟು, ಅಭಿಪ್ರಾಯಗಳನ್ನು ದಾಖಲಿಸಿ,ಮೆಚ್ಚುಗೆಯ ಮಾತನ್ನು ಆಡಿ ಪ್ರೋತ್ಸಾಹಿಸಿದ್ದೀರಿ. ಇದಕ್ಕೆ ನಾನು ನಿಮಗೆ ಚಿರಋಣಿ. ಇಲ್ಲಿ ಪಕ್ಕದಲ್ಲಿರುವ ತಲೆಬುರುಡೆ ಇಷ್ಟು ದಿನಗಳ ನಂತರ ಅದೇಕೊ irritating  ಅನ್ನಿಸುತ್ತಿದೆ. ಇಷ್ಟು ದಿನ ಈ ನಿವೇಶನದ ಮೇಲೆ ಯಾರ 'ದೃಷ್ಟಿಯೂ ಬೀಳದಂತೆ' ನೋಡಿಕೊಂಡಿದಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿ ಒಂದು ಪಿಂಕ್ ಸ್ಲಿಪ್ ನೀಡಬೇಕೆಂದುಕೊಂಡಿದ್ದೇನೆ. ನನಗೆ ಇದರ ಬಗ್ಗೆ ನಿಮ್ಮ ಅಭಿಪ್ರಾಯದ ತೀವ್ರ ಅವಶ್ಯಕತೆ ಇದೆ. ಈ ತಲೆಬುರುಡೆ ಇಲ್ಲಿರುವುದರಿಂದ ನಿಮಗೇನು ಅನ್ನಿಸಿದೆ, ಇದನ್ನು ಬದಲಾಯಿಸಬೇಕಾ ಅಥವ ಅದರಪಾಡಿಗೆ ಅದನ್ನು ಅಲ್ಲಿಯೇ ಬಿಡಬೇಕಾ? ಎಂದು ತಿಳಿಸಬೇಕಾಗಿ ವಿನಂತಿ.

ಇಂತಿ
ತಲೆಹರಟೆ

5 Comments:

Blogger Shiv said...

ತಲೆಬುರುಡೆಗೆ ಖಂಡಿತ ಪಿಂಕ್ ಸ್ಲಿಪ್ ಕೊಡಬೇಡಿ..
ತಲೆಬುರುಡೆ ತಲೆಹರಟೆ ಹೀಗೆ ಮುಂದುವರೆಯಲಿ..
ಅಂದಾಗೆ ತಲೆಬುರುಡೆ ಒಡೆಯುವ ಈ ಬುದ್ದಿ ಯಾಕೆ ಬಂತು?

5:42 PM  
Blogger ತಲೆಹರಟೆ said...

ಶಿವ,ಶಿವಾ!!!!
ನನಗೆ ತಲೆಬುರುಡೆ ಒಡೆಯುವ ಬುದ್ದಿಯಾ? ಅದು ನನ್ನ ಸ್ವಂತ ಬುದ್ದಿ ಅಂತು ಅಲ್ಲಾ. ವಿರೋಧ ಪಕ್ಷದವರ ಕೈವಾಡ ಇರಬೇಕು ಇದರಲ್ಲಿ! ಇದರ ಬಗ್ಗೆ ಅತ್ಯುನ್ನತ್ತ ಮಟ್ಟದ ತನಿಖೆ ಆಗಬೇಕು.

7:49 PM  
Blogger Anveshi said...

"ಒಂದಿಷ್ಟು ದಿನ Spice ಜತೆ ಚೆಲ್ಲಾಟ, ಮುಂದೆ Airtel ನೊಂದಿಗೆ ಚಕ್ಕಂದ. ಅದಾದ ಮೇಲೆ Hutch ನ ಸಹವಾಸ."
ಅಂದ್ರೆ... ಹೋಗಿ ಹೋಗಿ ಕೊನೆಗೆ ಹುಚ್ಚಿನ ಸಹವಾಸವೇ?

ಅಲ್ಲಾ ತಲೆಹರಟೆ ಅವರೆ, ನೀವು ಬುರುಡೆಯನ್ನು ವಿಸರ್ಜನೆ ಮಾಡಿದ್ರೆ ಆಮೇಲೆ ತಲೆಹರಟೆ ಹೇಗ್ರೀ ಮಾಡ್ತೀರಾ?

ಬುರುಡೆಯೊಳಗೆ ಏನಿದೆ?

4:14 AM  
Blogger ತಲೆಹರಟೆ said...

ಅಸತ್ಯಾನ್ವೇಷಿ ಸಾಹೇಬರೆ,
ತಲೆಹರಟೆ ಮಾಡಲು ತಲೆಬುರುಡೆ ಅತ್ಯವಶ್ಯಕನಾ? ಬುದ್ದಿ ಜೀವಿ ಆಗಲು ಬುದ್ದಿ ಇರಲೇಬೇಕು ಎಂಬ hard n fast rule ಏನು ಇಲ್ಲ ಎಂಬ 'ಅಸತ್ಯ'ವನ್ನು ಇನ್ನು ಅನ್ವೇಷಿಸಿಲ್ಲವಾ?
ತಲೆ ಹರಟೆ ಮಾಡಲು ತಲೆಬುರುಡೆ ಇಲ್ಲದೆ ಸಾಧ್ಯವಿಲ್ಲ ಎಂಬ 'ಅಸತ್ಯ'ದ ಅರಿವು ಮಾಡಿಕೊಟ್ಟಿದಕ್ಕೆ ಧಾನ್ಯ-ವಾದಗಳು

1:47 AM  
Blogger Enigma said...

tale harate madalu thale burade beku :d

7:20 AM  

Post a Comment

<< Home